Universal Acceptance Logo
Ministry of Electronics and Information Technology Logo
NIXI Logo

ಒಳ್ಳೆಯ ಅಭ್ಯಾಸಗಳು

iconic image of ಉನ್ನತ ಮಟ್ಟದ ಡೊಮೇನ್ ಗಳಿಗೆ (ಟಎಲ್ ಡಿ) ಸಮರರ್ಥನೆ ಉದಾ.  .भारत , सरकार.भारत

ಉನ್ನತ ಮಟ್ಟದ ಡೊಮೇನ್ ಗಳಿಗೆ (ಟಎಲ್ ಡಿ) ಸಮರರ್ಥನೆ ಉದಾ. .भारत , सरकार.भारत

ನಿಮ್ಮ ಡೊಮೇನ್ ಹೆಸರನ್ನು ಹಿಂದಿ, ತಮಿಳು ಮತ್ತು ಮರಾಠಿಯಂತಹ ಭಾರತೀಯ ಭಾಷೆಗಳಲ್ಲಿ ಪಡೆಯಿರಿ ಉದಾ. सीडैक.भारत

ಅಸ್ತಿತ್ವದಲ್ಲಿರುವ ಆಸ್ಕೀ (ASCII) ಡೊಮೇನ್ ಗೆ ಸಮಾನವಾದ (IDN) ಪಡೆಯಿರಿ

ನಿಮ್ಮ ಡೊಮೇನ್ ಹೆಸರನ್ನು ಸ್ಥಳೀಯ ಭಾಷೆಗೆ ಪರಿವರ್ತಿಸಿ (ಭಾಷಾಂತರಿಸಿ/ಲಿಪ್ಯಂತರಗೊಳಿಸಿ). ನೋಂದಾಯಿತ/ಬಳಕೆದಾರ IDN ಲಭ್ಯವಿರುವ ಭಾಷೆಯಲ್ಲಿ ಡೊಮೇನ್ ಹೆಸರಿನ ಭಾಷಾಂತರ ಮತ್ತು ಲಿಪ್ಯಂತರವನ್ನು NIC/.IN ರಿಜಿಸ್ಟ್ರಿ ಅಕ್ರೆಡಿಟೆಡ್ ರಿಜಿಸ್ಟ್ರಾರ್ ಗಳು (ಎನ್ಐಸಿ ಫಾರ್ ಸರ್ಕಾರ್). ಡೊಮೇನ್ ಮತ್ತು .IN ರಿಜಿಸ್ಟ್ರಿ ಮಾನ್ಯತೆ ಪಡೆದ ರಿಜಿಸ್ಟ್ರಾರ್ ಗಳು . ಡೊಮೇನ್ ನೇಮಗಳು)

ನಿಮ್ಮ ಡೊಮೇನ್ ವೈಲಿಡೇಟ

ಪ್ರಮಾಣೀಕರಣ ನಿಯಮಗಳೊಂದಿಗೆ ನಿಮ್ಮ ಸ್ಥಳೀಯ ಭಾಷಾ ಡೊಮೇನ್ ನೇಮನ್ನು ವೈಲಿಡೇಟ ಮಾಡಿ, ಏಕೆಂದರೆ ಇಂಗ್ಲಿಷ್ ಡೊಮೇನ್ ನೇಮಗಳಲ್ಲಿ ಅಕ್ಷರ, ಅಂಕಿಗಳು ಮತ್ತು ಹೈಫೆನ್ ಅನ್ನು ಮಾತ್ರ ಅನುಮತಿಸಲಾಗಿದೆ (LDH).

ನಿಮ್ಮ ಡೊಮೇನ್ ರಚಿಸಿ/ನೋಂದಾಯಿಸಿ

ಸಂಪರ್ಕ, ಡೊಮೇನ್ ಹೆಸರು ಪುನಿಕೋಡ್ ಸ್ಟ್ರಿಂಗ್ ಮತ್ತು ಹೆಸರು ಸರ್ವರ್ ವಿವರಗಳನ್ನು NIC/.IN ಗೆ ಒದಗಿಸಿ. ರಿಜಿಸ್ಟ್ರಿ ಮಾನ್ಯತೆ ಪಡೆದ ರಿಜಿಸ್ಟ್ರಾರ್ ಗಳು. ಪುನಿಕೋಡ್ ಎಂಬುದು ನಿಮ್ಮ ಯುನಿಕೋಡ್ ಡೊಮೇನ್ ಹೆಸರಿಗೆ ಸಮಾನವಾದ ಸ್ಟ್ರಿಂಗ್ ಆಗಿದೆ. ಕೆಲವು ಮಾರಾಟಗಾರರು ನೋಂದಣಿ ಮಾಡುವಾಗ ಪುನಿಕೋಡ್ ಅನ್ನು ನಿರೀಕ್ಷಿಸಬಹುದು. NIC/.IN ರಿಜಿಸ್ಟ್ರಿ ಮಾನ್ಯತೆ ಪಡೆದ ರಿಜಿಸ್ಟ್ರಾರ್ ಗಳು ಡೊಮೇನ್ ಹೆಸರುಗಳನ್ನು ರಚಿಸುತ್ತಾರೆ ಮತ್ತು ನೋಂದಣಿದಾರ/ಬಳಕೆದಾರರಿಗೆ ಮಾಹಿತಿ ನೀಡುತ್ತಾರೆ.

ವೆಬ್ ಸರ್ವರ್ ಕಾನ್ಫಿಗರ್

ನಿಮ್ಮ ವೆಬ್ ಸೈಟ್ ಸರ್ವರ್ ಯುನಿಕೋಡ್/ಪುನಿಕೋಡ್ ಗಾಗಿ ಬರುವ ವಿನಂತಿಗಳನ್ನು ಸ್ವೀಕರಿಸಬೇಕಾಗುತ್ತದೆ. ಎಲ್ಲಾ ಪ್ರಮುಖ ವೆಬ್-ಸರ್ವರ್ ಗಳು ಒಂದೇ ಕೋಡ್ ಗೆ ಬಹು ವೆಬ್-ಸೈಟ್ ಗಳನ್ನು ಸೂಚಿಸಲು ಬೆಂಬಲವನ್ನು ಒದಗಿಸುತ್ತವೆ. ನಿಮ್ಮ ಐಡಿಎನ್ (IDN) ಡೊಮೇನ್ ಹೆಸರನ್ನು ವೆಬ್ ಮಾಸ್ಟರ್/ಹೋಸ್ಟಿಂಗ್ ಪ್ರೊವೈಡರ್ ಗೆ ಶೇರ ಮಾಡಿ. ನಿಮ್ಮ ವ್ಯವಹಾರದ ಅಗತ್ಯಗಳಿಗೆ ಅನುಗುಣವಾಗಿ ಅಸ್ತಿತ್ವದಲ್ಲಿರುವ ಸೈಟ್ ಅಥವಾ ಸಂಬಂಧಿತ ಭಾರತೀಯ ಭಾಷೆಯ ವೆಬ್-ಸೈಟ್ ಗಳಿಗೆ ಒಳಬರುವ ಪುನಿಕೋಡ್ಅನ್ನು ಮ್ಯಾಪ್ ಮಾಡಲು ಅವರು ರೂಟಿಂಗ್ ನಿಯಮಗಳನ್ನು ಅಳವಡಿಸಬೇಕು. ಈಗ ಬಳಕೆದಾರರು ಇಂಗ್ಲಿಷ್ ಮತ್ತು ಭಾರತೀಯ ಭಾಷೆಯ ಡೊಮೇನ್ ಹೆಸರುಗಳೊಂದಿಗೆ ನಿಮ್ಮ ವೆಬ್ ಸೈಟ್ಅನ್ನು ಪ್ರವೇಶಿಸಲು ಸಾಧ್ಯವಾಗುತ್ತದೆ.

ಪುನಿಕೋಡ್ ಡೊಮೇನ್ ನೇಮಗಳೊಂದಿಗೆ ನಿಮ್ಮ SSL ಪ್ರಮಾಣಪತ್ರಗಳನ್ನು ಕಾನ್ಫಿಗರ್ ಮಾಡಿ

SSL ಪ್ರಮಾಣಪತ್ರಗಳು ನಿಮ್ಮ ವೆಬ್ ಸೈಟ್ ಸುರಕ್ಷಿತವಾಗಿರಲು ಸಹಾಯ ಮಾಡುತ್ತವೆ. ಆದ್ದರಿಂದ ನೀವು ಹೊಸ SSL ಪ್ರಮಾಣಪತ್ರವನ್ನು ಖರೀದಿಸಬೇಕು ಅಥವಾ ನಿಮ್ಮ ಅಸ್ತಿತ್ವದಲ್ಲಿರುವ SSL ಪ್ರಮಾಣಪತ್ರಕ್ಕೆ ಪುನಿಕೋಡ್ ಸ್ಟ್ರಿಂಗ್ ಅನ್ನು ಸೇರಿಸಬೇಕು. ಹೊಸ / ನವೀಕರಿಸಿದ SSL ಅನ್ನು ನಿಮ್ಮ ಸರ್ವರ್ ನಲ್ಲಿ ಕಾನ್ಫಿಗರ್ ಮಾಡಬೇಕಾಗಿದೆ. ಈಗ ಬಳಕೆದಾರರು ನಿಮ್ಮ ವೆಬ್-ಸೈಟ್ ಅನ್ನು ಇಂಗ್ಲಿಷ್ ಮತ್ತು ಭಾರತೀಯ ಭಾಷೆಯ ಡೊಮೇನ್ ಹೆಸರುಗಳೊಂದಿಗೆ https ನೊಂದಿಗೆ ಪ್ರವೇಶಿಸಲು ಸಾಧ್ಯವಾಗುತ್ತದೆ.
banner-1
banner-2

ಭಾರತೀಯ ಭಾಷೆಗಳಲ್ಲಿ ಇ-ಮೇಲ್ ಸೇವೆಯನ್ನು ಬಳಸಿ

ನಿಮ್ಮ ಇ-ಮೇಲ್ ಸೇವಾ ನೀಡುವಾಗ ಅಥವಾ ಅಪ್ಲಿಕೇಶನ್ ದೇವನಾಗರಿ, ತಮಿಳು ಅಥವಾ ಬಂಗಾಳಿಯಂತಹ ಭಾರತೀಯ ಲಿಪಿಗಳನ್ನು ಒಳಗೊಂಡಿರುವ ಇ-ಮೇಲ್ ವಿಳಾಸಗಳೊಂದಿಗೆ ಇ-ಮೇಲ್ ಗಳನ್ನು ಕಳುಹಿಸುವ ಮತ್ತು ಸ್ವೀಕರಿಸುವ ಬಗ್ಗೆ ಖಚಿತಪಡಿಸಿಕೊಳ್ಳಿ. ಭಾರತೀಯ ಸ್ಕ್ರಿಪ್ಟ್ ಗಳು ಮತ್ತು ಟಿಎಲ್ ಡಿಗಳೊಂದಿಗಿನ ಇ-ಮೇಲ್ ವಿಳಾಸಗಳನ್ನು ಸರಿಯಾಗಿ ರವಾನಿಸಲಾದ ಮತ್ತು ಸ್ವೀಕರಿಸಿದ ಬಗ್ಗೆ ಖಚಿತಪಡಿಸಿಕೊಳ್ಳಲು ಇ-ಮೇಲ್ ಸೇವಾ ಒದಗಿಸುವವರು ಇಎಐ (ಇ-ಮೇಲ್ ವಿಳಾಸ ಅಂತರರಾಷ್ಟ್ರೀಕರಣ) ನಂತಹ ಅಂತರರಾಷ್ಟ್ರೀಯೀಕೃತ ಇ-ಮೇಲ್ ಮಾನದಂಡಗಳನ್ನು ಬಳಸಬೇಕು.