Universal Acceptance Logo
Ministry of Electronics and Information Technology Logo
NIXI Logo

Features Section

ಭಾಷಾನೆಟ್ ಇನಿಶಿಯೇಟಿವ್

  • ದೃಷ್ಟಿಕೋನ
  • ಉದ್ದೇಶ
  • ಧ್ಯೇಯ
Globe graphic
ಸ್ಥಳೀಯ ಭಾಷೆಯಲ್ಲಿ ವೆಬ್-ಸೈಟ್ ಹೆಸರು ಮತ್ತು ಇ-ಮೇಲ್ ಐಡಿಯನ್ನು ಹೊಂದಿರುವ ನಿಜವಾದ ಬಹುಭಾಷಾ ಇಂಟರ್ನೆಟ್ ಅನ್ನು ಒದಗಿಸಲು, ನಿರಂತರ ಎಲ್ಲೆಡೆ ಕಾರ್ಯನಿರ್ವಹಿಸುತ್ತದೆ.
Infographics of ದೃಷ್ಟಿಕೋನ
Globe graphic
ಬಳಕೆದಾರರೊಂದಿಗೆ ಅವರ ಸ್ವಂತ ಭಾಷೆಗಳಲ್ಲಿ ಸಂಪರ್ಕ ಸಾಧಿಸಲು. ದೂರದಲ್ಲಿರುವ ಮತ್ತು ವಿಭಿನ್ನ ಸಾಮಾಜಿಕ ಆರ್ಥಿಕ ಹಿನ್ನೆಲೆಯ ಜನರು ಭಾರತದಲ್ಲಿ ಬಹುಭಾಷಾ ಇಂಟರ್ನೆಟ್ ಅನ್ನು ಪ್ರವೇಶಿಸಲು ಅನುವು ಮಾಡಿಕೊಡುವ ನಿಟ್ಟಿನಲ್ಲಿ ಭಾಷಾನೆಟ್ ಕೆಲಸ ಮಾಡುತ್ತಿದೆ.
Infographics of ಉದ್ದೇಶ
Globe graphic
  • ವೆಬ್-ಸೈಟ್ ಹೆಸರು ಮತ್ತು ಇ-ಮೇಲ್ ಐಡಿಯಲ್ಲಿ ಸ್ಥಳೀಯ ಭಾಷೆಯ ಬಳಕೆಯನ್ನು ಉತ್ತೇಜಿಸುವುದು.
  • ಸ್ಥಳೀಯ ಭಾಷೆಯ ಯುಆರ್ ಎಲ್ ಮತ್ತು ಇ-ಮೇಲ್ ಐಡಿ ಬಗ್ಗೆ ಜಾಗೃತಿ ಮೂಡಿಸುವುದು.
  • ನೀತಿ ಮತ್ತು ನಿಬಂಧನೆಗಳನ್ನು ಅಭಿವೃದ್ಧಿಪಡಿಸುವುದು.
  • ತಾಂತ್ರಿಕ ಸಹಯೋಗವನ್ನು ಸಮರ್ಥಿಸುತ್ತದೆ.
  • ವೆಬ್-ಸೈಟ್ ಮಾಲೀಕರು, ವೆಬ್-ಡೆವಲಪರ್ ಸಮುದಾಯ, ವೆಬ್ ಭದ್ರತಾ ತಜ್ಞರನ್ನು ತೊಡಗಿಸಿಕೊಳ್ಳುವಿಕೆ.
Infographics of ಧ್ಯೇಯ
This Infographics shows how universal acceptance works

ಪ್ರಕಟಣೆಗಳು

ಐಡಿಎನ್ ನಲ್ಲಿ ವೆಬ್ ಸೈಟ್ ಗಳು

ಸಾರ್ವತ್ರಿಕ ಸ್ವೀಕಾರ ವೆಬ್ ಸೈಟ್ ಗಳು ಅಂತರರಾಷ್ಟ್ರೀಯೀಕೃತ ಡೊಮೇನ್ ಹೆಸರುಗಳು (ಐಡಿಎನ್ಎಸ್) ಪಟ್ಟಿಯನ್ನು ಅನುಸರಿಸುತ್ತವೆ.

This video explains how to make your website Universal Acceptance ready and the way forward.

This video is a workshop focused on making your email platform Universal Acceptance ready.

This video is the curtain raiser event of the Universal Acceptance initiative.

ಪದೇ ಪದೇ ಕೇಳಲಾಗುವ ಪ್ರಶ್ನೆಗಳು


  • ನಿಮ್ಮ ಅಪೇಕ್ಷಿತ ಡೊಮೇನ್ ಹೆಸರಿನ ಲಭ್ಯತೆಯನ್ನು ಪರಿಶೀಲಿಸಿ: : ನ್ಯಾಷನಲ್ ಇಂಟರ್ನೆಟ್ ಎಕ್ಸ್ಚೇಂಜ್ ಆಫ್ ಇಂಡಿಯಾ (ನಿಕ್ಸೀ) ವೆಬ್-ಸೈಟ್ ಅಥವಾ ಭಾರತೀಯ ಭಾಷಾ ಡೊಮೇನ್ ಗಳನ್ನು ನೀಡುವ ಯಾವುದೇ ಮಾನ್ಯತೆ ಪಡೆದ ರಿಜಿಸ್ಟ್ರರ್ ಗೆ ಭೇಟಿ ನೀಡುವ ಮೂಲಕ ನಿಮ್ಮ ಅಪೇಕ್ಷಿತ ಡೊಮೇನ್ ಹೆಸರು ಭಾರತೀಯ ಭಾಷೆಗಳಲ್ಲಿ ಲಭ್ಯವಿದೆಯೇ ಇಲ್ಲವೇ ಎಂದು ನೀವು ಪರಿಶೀಲಿಸಬಹುದು.
  • ರಿಜಿಸ್ಟ್ರಾರ್ ಆಯ್ಕೆ: ನೀವು ಲಭ್ಯವಿರುವ ಡೊಮೇನ್ ಹೆಸರನ್ನು ಗುರುತಿಸಿದ ನಂತರ, ನೀವು ಭಾರತೀಯ ಭಾಷಾ ಡೊಮೇನ್ ಗ ಳನ್ನು ನೀಡುವ ರಿಜಿಸ್ಟ್ರಾರ್ ಅನ್ನು ಆಯ್ಕೆ ಮಾಡಬೇಕಾಗುತ್ತದೆ. ನಿಸ್ಕೀ ತನ್ನ ವೆಬ್-ಸೈಟ್ ನಲ್ಲಿ ಭಾರತೀಯ ಭಾಷಾ ಡೊಮೇನ್ ಗಳನ್ನು ನೀಡುವ ಮಾನ್ಯತೆ ಪಡೆದ ರಿಜಿಸ್ಟ್ರಾರ್ ಗಳ ಪಟ್ಟಿಯನ್ನು ಒದಗಿಸುತ್ತದೆ.
  • ಅಗತ್ಯ ಮಾಹಿತಿಯನ್ನು ಒದಗಿಸಿ:: ನಿಮ್ಮ ವೈಯಕ್ತಿಕ ಮತ್ತು ಸಂಪರ್ಕ ಮಾಹಿತಿ, ಹಾಗೆಯೇ ಬಯಸಿದ ಡೊಮೇನ್ ಹೆಸರು ಮತ್ತು ಅದನ್ನು ಬರೆಯಲಾದ ಭಾಷೆ/ಸ್ಕ್ರಿಪ್ಟ್ ಅನ್ನು ನೀವು ಒದಗಿಸಬೇಕಾಗುತ್ತದೆ. ನೀವು ಭಾರತೀಯ ಭಾಷಾ ಡೊಮೇನ್‌ಗಳಿಗೆ ಹೆಚ್ಚುವರಿ ದಾಖಲೆ ಅಥವಾ ಪರಿಶೀಲನೆಯನ್ನು ಒದಗಿಸಬೇಕಾಗಬಹುದು.
  • ನೋಂದಣಿ ಪ್ರಕ್ರಿಯೆಯನ್ನು ಪೂರ್ಣಗೊಳಿಸಿ: ಒಮ್ಮೆ ನೀವು ಅಗತ್ಯ ಮಾಹಿತಿಯನ್ನು ಒದಗಿಸಿದ ನಂತರ, ನೀವು ರಿಜಿಸ್ಟ್ರಾರ್ ವೆಬ್‌ಸೈಟ್ ಮೂಲಕ ನೋಂದಣಿ ಪ್ರಕ್ರಿಯೆಯನ್ನು ಪೂರ್ಣಗೊಳಿಸಬಹುದು. ನೀವು ನೋಂದಣಿ ಶುಲ್ಕವನ್ನು ಪಾವತಿಸಬೇಕಾಗಬಹುದು ಮತ್ತು ರಿಜಿಸ್ಟ್ರಾರ್‌ನ ನಿಯಮಗಳು ಮತ್ತು ಷರತ್ತುಗಳನ್ನು ಒಪ್ಪಿಕೊಳ್ಳಬೇಕು.
  • ನಿಮ್ಮ ಡೊಮೇನ್ ಕಾನ್ಫಿಗರ್ ಮಾಡಿ:  ನಿಮ್ಮ ಡೊಮೇನ್ ನೋಂದಾಯಿಸಿದ ನಂತರ, ನಿಮ್ಮ ವೆಬ್-ಸೈಟ್, ಇ-ಮೇಲ್ ಅಥವಾ ಇತರ ಆನ್-ಲೈನ್ ಸೇವೆಗಳೊಂದಿಗೆ ಬಳಸಲು ನೀವು ಅದನ್ನು ಕಾನ್ಫಿಗರ್ ಮಾಡಬಹುದು.

  • ಭಾರತೀಯ ಭಾಷೆಗಳಲ್ಲಿ ಡೊಮೇನ್ ನೇಮಗಳ ಲಭ್ಯತೆಯು ಲಿಪಿ ಮತ್ತು ಭಾಷೆಯನ್ನು ಅವಲಂಬಿಸಿ ಬದಲಾಗಬಹುದನ್ನು ಗಮನಿಸುವುದು, ಅದಲ್ಲದೇ ಭಾರತೀಯ ಭಾಷಾ ಡೊಮೇನ್ ಗಳ ನಿರ್ದಿಷ್ಟ ಅವಶ್ಯಕತೆ ಅಥವಾ ನಿರ್ಬಂಧಗಳನ್ನು ಹೊಂದಿರಬಹುದು, ಆದ್ದರಿಂದ ಹೆಚ್ಚಿನ ಮಾಹಿತಿಗಾಗಿ ರಿಜಿಸ್ಟ್ರಾರ್ ಅಥವಾ ನಿಸ್ಕೀಯೊಂದಿಗೆ ಪರಿಶೀಲಿಸಬೇಕು.

ಸಾರ್ವತ್ರಿಕ ಸ್ವೀಕೃತಿಯನ್ನು ಸಾಧಿಸಲು, ಡೊಮೇನ್ ನೇಮ ರಿಜಿಸ್ಟ್ರಿಗಳು, ಇ-ಮೇಲ್ ಸೇವಾ ಪೂರೈಕೆದಾರರು, ಅಪ್ಲಿಕೇಶನ್ ಡೆವಲಪರ್ ಗಳು ಮತ್ತು ಇತರರು ಸೇರಿದಂತೆ ಇಂಟರ್ನೆಟ್ ಪರಿಸರ ವ್ಯವಸ್ಥೆಯ ಎಲ್ಲಾ ಪಾಲುಗಾರರಿಗೆ ಅಸ್ಕೀ ಅಲ್ಲದ ಡೊಮೇನ್ ನೇಮ ಮತ್ತು ಇ-ಮೇಲ್ ವಿಳಾಸಗಳನ್ನು ಬೆಂಬಲಿಸುವ ತಾಂತ್ರಿಕ ಮಾನದಂಡಗಳನ್ನು ಅಳವಡಿಸಿಕೊಂಡು ಕಾರ್ಯಗತಗೊಳಿಸುವುದು ಮುಖ್ಯವಾಗಿದೆ. ಅದಲ್ಲದೇ, ಶಿಕ್ಷಣ ಮತ್ತು ಜಾಗೃತಿ ಮೂಡಿಸುವ ಪ್ರಯತ್ನ ಸಾರ್ವತ್ರಿಕ ಸ್ವೀಕೃತಿಯನ್ನು ಉತ್ತೇಜಿಸಲು ಸಹಾಯ ಮಾಡುತ್ತದೆ ಮತ್ತು ಬಳಕೆದಾರರು ಅವರಿಗೆ ಲಭ್ಯವಿರುವ ಆಯ್ಕೆಗಳ ಬಗ್ಗೆ ತಿಳಿದಿದ್ದಾರೆ ಎಂದು ಖಚಿತಪಡಿಸಿಕೊಳ್ಳಬೇಕು.

ಯುನಿವರ್ಸಲ್ ಸ್ವೀಕೃತಿ (ಯುಎ) ಮಾರ್ಗಸೂಚಿಗಳು ಎಲ್ಲಾ ಡೊಮೇನ್ ನೇಮ ಮತ್ತು ಇ-ಮೇಲ್ ವಿಳಾಸಗಳ ಬಳಕೆಯನ್ನು ಸಮರ್ಥಿಸಲು ಉತ್ತಮ ಅಭ್ಯಾಸ ಮತ್ತು ಶಿಫಾರಸುಗಳ ಗುಂಪಾಗಿದೆ, ಅವುಗಳ ಸ್ಕ್ರಿಪ್ಟ್, ಭಾಷೆ ಅಥವಾ ಸ್ವರೂಪವನ್ನು ಲೆಕ್ಕಿಸದೇ ಎಲ್ಲಾ ಡೊಮೇನ್ ನೇಮ ಮತ್ತು ಇ-ಮೇಲ್ ವಿಳಾಸಗಳ ಸಾರ್ವತ್ರಿಕ ಸ್ವೀಕೃತಿಯನ್ನು ಉತ್ತೇಜಿಸಲು ಕೆಲಸ ಮಾಡುವ ಸಮುದಾಯ ನೇತೃತ್ವದ ಉಪಕ್ರಮವಾದ ಯುನಿವರ್ಸಲ್ ಅಕ್ಸೆಪ್ಷನ್ ಸ್ಟೀರಿಂಗ್ ಗ್ರೂಪ್ (ಯುಎಎಸ್ ಜಿ) ಮಾರ್ಗಸೂಚಿಗಳನ್ನು ಅಭಿವೃದ್ಧಿಪಡಿಸಿದೆ.

ಯುಎ ಮಾರ್ಗಸೂಚಿಗಳು ಸಾಫ್ಟ್ವೇರ್ ಮತ್ತು ಸಿಸ್ಟಮ್ ಡೆವಲಪರ್, ಡೊಮೇನ್ ನೇಮ ನೋಂದಣಿಗಳು, ಇ-ಮೇಲ್ ಸೇವಾ ಪೂರೈಕೆದಾರರು ಮತ್ತು ಇಂಟರ್ನೆಟ್ ವ್ಯವಸ್ಥೆ ಮತ್ತು ಅಪ್ಲಿಕೇಶನ್ ಗಳ ನಿರ್ವಹಣೆ ಮತ್ತು ಅನುಷ್ಠಾನದಲ್ಲಿ ತೊಡಗಿರುವ ಇತರ ಪಾಲುಗಾರರಿಗೆ ವಿವರವಾದ ಶಿಫಾರಸುಗಳನ್ನು ಒದಗಿಸುತ್ತದೆ. ಮಾರ್ಗಸೂಚಿಗಳು ಸಾರ್ವತ್ರಿಕ ಸ್ವೀಕೃತಿಗೆ ಸಂಬಂಧಿಸಿದ ವ್ಯಾಪಕ ಶ್ರೇಣಿಯ ಈ ವಿಷಯಗಳನ್ನು ಒಳಗೊಂಡಿವೆ:

  1. ಡೊಮೇನ್ ನೇಮ ನೋಂದಣಿ ಮತ್ತು ಕಾರ್ಯನಿರ್ವಹಣೆ
  2. ಇ-ಮೇಲ್ ವಿಳಾಸ ದೃಢೀಕರಣ ಮತ್ತು ನಿರ್ವಹಣೆ
  3. ಐಡಿಎನ್ ಅನುಷ್ಠಾನ ಮತ್ತು ಸಮರ್ಥನೆ
  4. ವೆಬ್ ಮತ್ತು ಅಪ್ಲಿಕೇಶನ್ ಅಭಿವೃದ್ಧಿ
  5. ಟೆಸ್ಟಿಂಗ್ ಮತ್ತು ವ್ಯಾಲಿಡೇಶನ್
  6. ಬಳಕೆದಾರಿಗೆ ಶಿಕ್ಷಣ ಮತ್ತು ಜಾಗೃತಿ ಮೂಡಿಸುವುದು

ಭಾರತೀಯ ಭಾಷೆಗಳಲ್ಲಿ ಇಮೇಲ್ ಐಡಿ ಪಡೆಯಲು, ನೀವು ಈ ಹಂತಗಳನ್ನು ಅನುಸರಿಸಬಹುದು:

  • ಇ-ಮೇಲ್ ಸೇವೆ ನೀಡುವವರನ್ನು ಆಯ್ಕೆ ಮಾಡಿ:  ಗೂಗಲ್, ಮೈಕ್ರೋಸಾಫ್ಟ್ ಮತ್ತು ರಿಡಿಫಮೇಲ್ ಭಾರತೀಯ ಭಾಷೆಗಳಲ್ಲಿ ಇ-ಮೇಲ್ ಐಡಿಗಳಿಗೆ ಬೆಂಬಲವನ್ನು ನೀಡುವ ಹಲವಾರು ಇ-ಮೇಲ್ ಸೇವೆ ನೀಡುವ ಪೂರೈಕೆದಾರರು ಇದ್ದಾರೆ. ನಿಮ್ಮ ಆದ್ಯತೆ ಭಾರತೀಯ ಭಾಷೆಗೆ ಬೆಂಬಲವನ್ನು ನೀಡುವ ಇ-ಮೇಲ್ ಸೇವಾ ಪೂರೈಕೆದಾರರನ್ನು ಆಯ್ಕೆ ಮಾಡಬೇಕು.
  • ನಿಮ್ಮ ಅಪೇಕ್ಷಿತ ಇ-ಮೇಲ್ ಐಡಿಯ ಲಭ್ಯತೆಯನ್ನು ಪರಿಶೀಲಿಸಿ: : ಒಮ್ಮೆ ನೀವು ಇ-ಮೇಲ್ ಸೇವಾ ಪೂರೈಕೆದಾರರನ್ನು ಆಯ್ಕೆ ಮಾಡಿದ ನಂತರ, ನಿಮ್ಮ ಅಪೇಕ್ಷಿತ ಇ-ಮೇಲ್ ಐಡಿ ಭಾರತೀಯ ಭಾಷೆಗಳಲ್ಲಿ ಲಭ್ಯವಿದೆಯೇ ಎಂದು ನೀವು ಪರಿಶೀಲಿಸಬಹುದು. ಹೆಚ್ಚಿನ ಮಾಹಿತಿಗಾಗಿ ನೀವು ಪೂರೈಕೆದಾರರ ವೆಬ್-ಸೈಟ್ ಅನ್ನು ಪರಿಶೀಲಿಸಬೇಕು ಅಥವಾ ಅವರನ್ನು ಸಂಪರ್ಕಿಸಬೇಕಾಗಬಹುದು.
  • ಹೊಸ ಇ-ಮೇಲ್ ಖಾತೆಯನ್ನು ರಚಿಸಿ: ನಿಮ್ಮ ಅಪೇಕ್ಷಿತ ಇ-ಮೇಲ್ ಐಡಿ ಲಭ್ಯವಿದ್ದರೆ, ನೀವು ಆಯ್ಕೆ ಮಾಡಿದ ಇ-ಮೇಲ್ ಸೇವಾ ನೀಡುಗರೊಂದಿಗೆ ಹೊಸ ಇ-ಮೇಲ್ ಖಾತೆಯನ್ನು ರಚಿಸಬಹುದು. ನೀವು ನಿಮ್ಮ ವೈಯಕ್ತಿಕ ಮತ್ತು ಸಂಪರ್ಕ ಮಾಹಿತಿಯನ್ನು ಒದಗಿಸಬೇಕಾಗುತ್ತದೆ, ಜೊತೆಗೆ ನಿಮ್ಮ ಅಪೇಕ್ಷಿತ ಇ-ಮೇಲ್ ಐಡಿ ಮತ್ತು ಭಾಷೆಯನ್ನು ಆಯ್ಕೆ ಮಾಡಬೇಕು.
  • ನಿಮ್ಮ ಇ-ಮೇಲ್ ಸೆಟ್ಟಿಂಗ್ ಗಳನ್ನು ಕಾನ್ಫಿಗರ್ ಮಾಡಿ:  ಒಮ್ಮೆ ನಿಮ್ಮ ಇ-ಮೇಲ್ ಖಾತೆಯನ್ನು ರಚಿಸಿದ ನಂತರ, ಫಿಲ್ಟರ್ ಗಳನ್ನು ಹೊಂದಿಸುವುದು, ಫಾರ್ವರ್ಡಿಂಗ್ ಅಥವಾ ಇತರ ಇ-ಮೇಲ್ ನಿರ್ವಹಣಾ ಆಯ್ಕೆಗಳಿಗೆ ಸರಿಹೊಂದುವಂತೆ ನಿಮ್ಮ ಇ-ಮೇಲ್ ಸೆಟ್ಟಿಂಗ್ ಗಳನ್ನು ಕಾನ್ಫಿಗರ್ ಮಾಡಬಹುದು.
  • ನಿಮ್ಮ ಇ-ಮೇಲ್ ಐಡಿಯನ್ನು ಬಳಸಲು ಪ್ರಾರಂಭಿಸಿ: : : ನಿಮ್ಮ ಇ-ಮೇಲ್ ಖಾತೆಯನ್ನು ಹೊಂದಿಸಿ ಕಾನ್ಫಿಗರ್ ಮಾಡಿದ ನಂತರ, ಭಾರತೀಯ ಭಾಷೆಗಳಲ್ಲಿ ನಿಮ್ಮ ಇ-ಮೇಲ್ ಐಡಿಯನ್ನು ಬಳಸೆಕೊಂಡು ಇ-ಮೇಲ್ ಕಳುಹಿಸಲು ಮತ್ತು ಸ್ವೀಕರಿಸಲು ಪ್ರಾರಂಭಿಸಬಹುದು.

  • ಎಲ್ಲಾ ಇ-ಮೇಲ್ ಸೇವಾ ಪೂರೈಕೆದಾರರು ಭಾರತೀಯ ಭಾಷೆಗಳಲ್ಲಿ ಇ-ಮೇಲ್ ಐಡಿಗಳಿಗೆ ಸಮರ್ಥಿಸುವುದಿಲ್ಲ ಎಂಬುದನ್ನು ಗಮನಿಸುವುದು ಮುಖ್ಯ, ಮತ್ತು ಪೂರೈಕೆದಾರರನ್ನು ಅವಲಂಬಿಸಿ ಭಾಷೆಗಳ ಲಭ್ಯತೆಯು ಬದಲಾಗಬಹುದು. ಅದಲ್ಲದೇ, ಕೆಲವು ಭಾರತೀಯ ಭಾಷೆಗಳು ನಿರ್ದಿಷ್ಟ ಅವಶ್ಯಕತೆಗಳು ಅಥವಾ ನಿರ್ಬಂಧಗಳನ್ನು ಹೊಂದಿರಬಹುದು, ಆದ್ದರಿಂದ ಹೆಚ್ಚಿನ ಮಾಹಿತಿಗಾಗಿ ಇ-ಮೇಲ್ ಸೇವಾ ಪೂರೈಕೆದಾರರೊಂದಿಗೆ ಪರಿಶೀಲಿಸುವುದು ಮುಖ್ಯ.

ಸಹಾಯವಾಣಿ ಕೇಂದ್ರ

icon for contact us

ಸರ್ಕಾರ.ಭಾರತ (ಅಥವಾ ಸಮಾನ) ಅಡಿಯಲ್ಲಿ ಡೊಮೇನ್ ಹೆಸರುಗಳನ್ನು ನೋಂದಾಯಿಸಲು

ಟೋಲ್ ಫ್ರೀ ಸಂಖ್ಯೆ : 1800111555, 011-24305000

ಜಾಲತಾಣ :https://servicedesk.nic.in


.bharaticon

.ಭಾರತದ ಅಡಿಯಲ್ಲಿ ಡೊಮೈನ್ ಹೆಸರುಗಳನ್ನು ನೋಂದಾಯಿಸಲು (ಅಥವಾ ಸಮಾನ)

ಸಂಪರ್ಕಿಸಿ : +91-11-48202040, +91-11-48202011,
ದೂರವಾಣಿ: +91-11-48202000
ಇಮೇಲ್ : uasupport@nixi.in, rishab@nixi.in, rajiv@nixi.in, support@bhashanet.in