Universal Acceptance Logo
Ministry of Electronics and Information Technology Logo
NIXI Logo

ಟ್ಯಾಗ್ ಲೈನ್: - ಸ್ಥಳೀಯ ಭಾಷೆಯಲ್ಲಿ ಇ-ಮೇಲ್ ಐಡಿ

this infographics shows how indian languages use for email Internationalization. In this inforgraphics there are indian langauges letters that moving aroung laptop

ಇಎಐ: ಸ್ಥಳೀಯ ಭಾಷೆಯಲ್ಲಿ ಇ-ಮೇಲ್ ಐಡಿ (ಮೆರನಾಮ್@ನಿಕ್ಸಿ.ಭಾರತ)

ಇ-ಮೇಲ್ ವಿಳಾಸದ ಅಂತರ್ರಾಷ್ಟ್ರೀಕರಣ (ಇಎಐ): ಇಂಗ್ಲಿಷ್ ಆಧಾರಿತ ಇ-ಮೇಲ್ ವಿಳಾಸಗಳಲ್ಲಿ ಬಳಸುವ ಸಾಂಪ್ರದಾಯಿಕ ಆಸ್ಕೀ (ASCII) ಅಕ್ಷರಗಳ ಜೊತೆಗೆ ಹಿಂದಿ, ಮರಾಠಿ, ಬೆಂಗಾಲಿ, ಗುಜರಾತಿ ಅಥವಾ ತಮಿಳು ಮುಂತಾದ ಭಾಷೆಗಳಲ್ಲಿ ಬಳಸುವಂತಹ ಆಸ್ಕೀ (ASCII) ಅಲ್ಲದ ಅಕ್ಷರಗಳನ್ನು ಬಳಸಲು ಇ-ಮೇಲ್ ವಿಳಾಸಗಳನ್ನು ಅನುಮತಿಸುವ ಪ್ರಕ್ರಿಯೆಯಾಗಿದೆ. ಇದು ಜನರಿಗೆ ತಮ್ಮ ಸ್ಥಳೀಯ ಭಾಷೆ ಮತ್ತು ಸ್ಕ್ರಿಪ್ಟ್ ನ್ನು ಬಳಸಲು ಇ-ಮೇಲ್ ವಿಳಾಸಗಳನ್ನು ರಚಿಸಲು ಅನುವು ಮಾಡಿಕೊಡುತ್ತದೆ, ಇದರಿಂದಾಗಿ ಅವರು ಆನ್-ಲೈನ್ ನಲ್ಲಿ ವ್ಯವಹರಿಸಲು ಸುಲಭವಾಗುತ್ತದೆ.

ಇ-ಮೇಲ್ ವಿಳಾಸಗಳಲ್ಲಿ ಆಸ್ಕೀ (ASCII) ಅಲ್ಲದ ಅಕ್ಷರಗಳನ್ನು ಪ್ರತಿನಿಧಿಸಲು ಇಎಐ ಯುನಿಕೋಡ್ ಎನ್ಕೋಡಿಂಗ್ ಮಾನದಂಡವನ್ನು ಬಳಸುತ್ತದೆ, ಮತ್ತು ಇ-ಮೇಲ್ ಕ್ಲೈಂಟ್ ಮತ್ತು ಇ-ಮೇಲ್ ಸರ್ವರ್ ಗಳು ಇ-ಮೇಲ್ ನ್ನು ನಿರ್ವಹಿಸುವ ವಿಧಾನದಲ್ಲಿ ಬದಲಾವಣೆಗಳು ಬೇಕಾಗುತ್ತವೆ. ಉದಾಹರಣೆಗೆ, ಇ-ಮೇಲ್ ಕ್ಲೈಂಟ್ ಗಳು ಬಳಕೆದಾರ ಇಂಟರ್ಫೇಸ್ ನಲ್ಲಿ ಆಸ್ಕೀ (ASCII) ಅಲ್ಲದ ಅಕ್ಷರಗಳನ್ನು ಪ್ರದರ್ಶಿಸಲು ಸಮರ್ಥರಾಗಿರಬೇಕು, ಮತ್ತು ಇ-ಮೇಲ್ ಸರ್ವರ್ ಗಳು ಆಸ್ಕೀ (ASCII) ಅಲ್ಲದ ವಿಳಾಸಗಳನ್ನು ಸರಿಯಾಗಿ ಕಾರ್ಯಗತಗೊಳಿಸಲು ಮತ್ತು ಸಂದೇಶಗಳನ್ನು ಸರಿಯಾದ ಸ್ಥಾನಕ್ಕೆ ಫಾರ್ವರ್ಡ್ ಮಾಡಲು ಸಾಧ್ಯವಾಗುತ್ತದೆ.

ಸಿಂಪಲ್ ಮೇಲ್ ಟ್ರೈನ್ಸ್ಫರ ಪ್ರೋಟೋಕಾಲ್ (SMTP) ಬಳಸಿ ಆಸ್ಕೀ (ASCII) ಅಲ್ಲದ ಅಕ್ಷರಗಳನ್ನು ಹೊಂದಿರುವ ಇ-ಮೇಲ್ ವಿಳಾಸಗಳನ್ನು ಕಳುಹಿಸಲು ಅನುಮತಿಸುವ SMTPUTF8 ಸೇರಿದಂತೆ ಇಎಐ ಅನ್ನು ಬೆಂಬಲಿಸಲು ಹಲವಾರು ತಾಂತ್ರಿಕ ಮಾನದಂಡಗಳನ್ನು ಅಭಿವೃದ್ಧಿಪಡಿಸಲಾಗಿದೆ, ಮತ್ತು IDNA2008, ಇದು ಆಸ್ಕೀ (ASCII) ಅಲ್ಲದ ಅಕ್ಷರಗಳನ್ನು ಹೊಂದಿರುವ ಡೊಮೇನ್ ಹೆಸರುಗಳನ್ನು ಇಂಟರ್ನೆಟ್ ಬಳಸುವ ಆಸ್ಕೀ (ASCII) ಆಧಾರಿತ ಡೊಮೇನ್ ನೇಮ್ ಸಿಸ್ಟಮ್ (DNS) ಗೆ ಭಾಷಾಂತರಿಸಲು ಅನುವು ಮಾಡಿಕೊಡುತ್ತದೆ.